ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 21 April 2012

ಮತ್ತೆ ನಾ ಮಗುವಾಗಬೇಕು



ನಾ ಮಗುವಾಗಬೇಕು
ಅಮ್ಮಾ, ಮತ್ತೊಮ್ಮೆ ನಾ
ನಿನ್ನ ಪುಟ್ಟ ಮಗುವಾಗಬೇಕು..
ನಿನ್ನ ಮಡಿಲಲ್ಲರಳಿ
ಮತ್ತೊಮ್ಮೆ ನಾ ನಗುವಾಗಬೇಕು..
ನಕ್ಕು ನಲಿಯಬೇಕು
ಜಗವೂ ನನ್ನ ಹಿಮ್ಮೇಳವಾಗುವಂತೆ,
ಹೆಂಗೆಳೆಯರು ಕಂಕುಳಲೇರಿಸಿ
ಮುತ್ತಿಟ್ಟು ಮುದ್ದಿಸುವಂತೆ..!

ಅರಿಯದೆ ಅಂದು ಒದ್ದಿದ್ದಿರಬಹುದು,
ನಾ ನಿನ್ನ ಎದೆಗೆ,
ನನ್ನ ದೇವರ ಗರ್ಭಗುಡಿಗೆ,
ಅದೆಷ್ಟು ನೋವಾಗಿತ್ತೋ ನಿನಗೆ
ಆದ ನೋವ ಹಿಂಗಿಸಿ
ನನ್ನ ಪುಟ್ಟ ಪಾದಗಳ ಮುದ್ದಿಸಿದ್ದೆಯಂತೆ
ಅಜ್ಜಿ ಹೇಳಿದ ಕಥೆಯಿದು
ಜಗದ ಅದೃಷ್ಟವೇ ನನ್ನದಂತೆ..!

ಸಾಕು ಸಾಕಾಗಿದೆ
ಚೈತನ್ಯವ ಹತ್ತಿಕ್ಕಿ, ನೋವುಣಿಸುವ,
ಕಬಂದ ಬಾಹುಗಳ ಚಾಚುವ
ಜಗದ ಜಂಜಡಗಳ ಸಹವಾಸ..!
ಕ್ಷಣ ಮಾತ್ರವಾದರೂ ಮತ್ತೆ ಮಗುವಾಗಿಬಿಡುತ್ತೇನೆ
ನಿನ್ನ ಮಡಿಲ್ ಸೇರಿಬಿಡುತ್ತೇನೆ,
ಚೈತನ್ಯ ಉಣಿಸಿ ನೀರೆರೆಯೆ ತಾಯಿ
ಜಗದೊಡತಿ ಕರುಣಾಮಯಿ...

- ಪ್ರಸಾದ್.ಡಿ.ವಿ.

8 comments:

  1. ಚೆನ್ನಾಗಿದೆ ಕವಿತೆಯ ಭಾವಗಳು. ಈ ಪ್ರತಿಮೆಗೆ ಬರೆದಷ್ಟು ಮುಗಿಯದ, ಯೋಚಿಸಿದಷ್ಟು ಅಳವಾಗಿ ತೆರೆದುಕೊಳ್ಳುವ ಹೊಕ್ಕಳ ಬಳ್ಳಿಯ ಜಗತ್ತು. ತುಂಬಾ ಸುಂದರವಾದ ಮುಗ್ದ ಭಾವಗಳನ್ನು ಇಲ್ಲಿ ಕಾಣುತ್ತಿದ್ದೇನೆ.

    ReplyDelete
    Replies
    1. ನಿಮ್ಮ ಪ್ರೀತಿ ಪೂರ್ವಕ ಮೆಚ್ಚುಗೆಯ ನುಡಿಗಳಿಗೆ ಮನ ತುಂಬಿ ಬಂತು ರವಿಯಣ್ಣ.. ನಿಮ್ಮ ಸಹಕಾರ ಹೀಗೆಯೆ ಇರಲಿ.. ಧನ್ಯವಾದಗಳು..:)))

      Delete
  2. ಕವಿತೆಯಲ್ಲಿ ಪ್ರೀತಿ ವಾತ್ಸಲ್ಯ ಉಕ್ಕಿ ಹರಿಯುತ್ತಿದೆ. ಓದಿದ ಎಲ್ಲರೂ ಒಮ್ಮೆ ತಮ್ಮ ಅಮ್ಮಂದಿರಿಗೆ ಈ ಕವಿತೆಯನ್ನು ಅರ್ಪಿಸಿದರೇನೋ! ನಾ ಓದಿದ ಅತ್ಯುತ್ತಮ ಕವಿತೆಗಳಲ್ಲೊಂದು!

    ReplyDelete
    Replies
    1. ನಿಮ್ಮ ಮಾತಿನಿಂದ ಉಬ್ಬಿ ಹೋಗಿದ್ದೇನೆ.. ಇದು ನನ್ನ ಪಾಲಿಗೆ ದೊಡ್ಡ ಬಹುಮಾನ..:))) ನಲ್ಮೆಯ ಧನ್ಯವಾದಗಳು..

      Delete
  3. Replies
    1. ನಿಮ್ಮ ಮೆಚ್ಚುಗೆಗೆ ತುಂಬು ಮನದ ಧನ್ಯವಾದಗಳು ಸುಷ್ಮಾ..:)))

      Delete
  4. ಬಹಳ ಸುಂದರ ಕವಿತೆ !ಮತ್ತೆ ಮಗುವಾಗುವ ಆಸೆ , ಇದು ಒಮ್ಮೊಮ್ಮೆ ಬದುಕಿನ ಜಂಜಾಟದಲ್ಲಿ ತೀವ್ರವಾಗಿ ಹಾಯ್ದು ಹೋಗುವ ಆಶಯ , ಇದನ್ನು ನೀವು ಇನ್ನಸ್ತು ಭಾವದ ಗಳ ವಾತ್ಸಲ್ಯ ಭರಿತ ಹೊದಿಕೆಯಿಂದ ಬೆಚ್ಚಗೆ ಹೊದ್ದಿಸಿದ್ದೀರ , ಮನಮುಟ್ಟುವ ಕವನ !

    ಆರತಿ ಘತಿಕಾರ್

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಮತ್ತೆ ಮಗುವಾಗಿ ಕುಣಿದಿದ್ದೇನೆ ಆರತಿ ಅಕ್ಕಾ.. ಇಪ್ಪತ್ಮೂರು ವರ್ಷದವನು ಮಗುವಾಗ ಬಯಸಿದ ಇಂಗಿತ ವ್ಯಕ್ತಪಡಿಸಿದರೂ ಬೆನ್ನು ತಟ್ಟಿದಿರಲ್ಲಾ, ನನ್ನ ಪ್ರಯತ್ನ ಸಾರ್ಥಕ..:)))

      Delete